ತಪ್ಪು ಜೀವನಶೈಲಿ ಹಾಗೂ ತಪ್ಪು ಆಹಾರಪದ್ಧತಿಯಿಂದ ಕಾಯಿಲೆಗಳು ಹೆಚ್ಚಾಗುತ್ತಿವೆ. ಉದಾಹರಣೆಗೆ ಹೃದಯಾಘಾತ. ಇಡೀ ಪ್ರಪಂಚದ ಶೇ. 50ರಷ್ಟು ಹೃದಯಾಘಾತ ಭಾರತದಲ್ಲಿ ಆಗುತ್ತಿದೆ. ಅದೇ ರೀತಿ ಭಾರತವು ಮಧುಮೇಹದ ರಾಜಧಾನಿಯಾಗುತ್ತಿದೆ.

ಅತಿಯಾದ ಉಪ್ಪು ಸೇವನೆ, ಕರಿದ ಆಹಾರಪದಾರ್ಥಗಳ ಸೇವನೆಯಿಂದಾಗಿ ಹೆಚ್ಚಿನ ಬಿ.ಪಿ. ಸಮಸ್ಯೆಗಳು ಭಾರತದಲ್ಲಿ ಕಂಡುಬರುತ್ತಿವೆ. ಪಾರ್ಶ್ವವಾಯು, ಮಹಿಳೆಯರಲ್ಲಿ ಪಿಸಿಒಡಿ, ಬಂಜೆತನ, ಬೊಜ್ಜು ಇತ್ಯಾದಿ ಸಮಸ್ಯೆಗಳು ಕಂಡುಬರುತ್ತಿವೆ. ಇವುಗಳಿಂದ ಇನ್ನಿತರ ಸಮಸ್ಯೆಗಳೂ ಕಾಡುತ್ತಿವೆ. ಉದಾಹರಣೆಗೆ ತೂಕ ಹೆಚ್ಚಳದಿಂದ ಮಂಡಿನೋವು, ಹಿಮ್ಮಡಿ ನೋವು ಇತ್ಯಾದಿ.

ಇಂತಹ ಸಮಸ್ಯೆಗಳಿಗೆ ಕಡಿವಾಣ ಹಾಕಲೇಬೇಕು. ಸಮಸ್ಯೆ ಕಾಡಲು ಪ್ರಾರಂಭವಾದ ತಕ್ಷಣ ನಮ್ಮ ಕಣ್ಣಿಗೆ ಆಸ್ಪತ್ರೆ ಹಾಗೂ ಔಷಧಾಲಯಗಳೇ ಕಾಣಿಸುತ್ತವೆ. ಮೊದಲು ಒಂದಷ್ಟು ಮಾತ್ರೆಗಳನ್ನು ನುಂಗಿ ನೀರು ಕುಡಿದು ಕಡಿಮೆ ಮಾಡಿಕೊಂಡರೆ ಸಾಕು ಎಂಬ ಭಾವನೆ ಮೂಡುತ್ತದೆ. ನೋವನ್ನು ಕೊಲ್ಲುವ ಮಾತ್ರೆಗಳು, ಒಮ್ಮೆ ಸಮಸ್ಯೆಯನ್ನು ಮಾಯವಾಗಿಸುವ ಮಾಂತ್ರಿಕ ಗುಳಿಗೆ, ಟಾನಿಕ್‌ಗಳು ಎಷ್ಟು ದಿನ ನಮ್ಮನ್ನು ಸಲಹಬಲ್ಲವು? ಸಮಸ್ಯೆಯ ಮೂಲಕ್ಕೆ ಸರಿಯಾದ ಚಿಕಿತ್ಸೆಯನ್ನು ನೀಡದಿದ್ದರೆ ಕಳೆಯಂತೆಯೇ ಪುನಃ ಬೆಳೆದುಕೊಳ್ಳುತ್ತದೆ.

ಕಳೆಯನ್ನು ಕಿತ್ತೆಸೆಯುವ ಕಾರ್ಯವಾಗಬೇಕು.
ಸೋಂಕಿನಿಂದ ಉಂಟಾಗುವ ಟೈಫಾಯ್ಡ್, ಮಲೇರಿಯಾ ಇತ್ಯಾದಿ ಕಾಯಿಲೆಗಳಿಗೆ ಆ ಸೋಂಕನ್ನು ದೇಹದಿಂದ ತೊಡೆದುಹಾಕುವ ಅವಶ್ಯಕತೆ ಇರುತ್ತದೆ. ಆಗ ಗುಳಿಗೆ, ಮಾತ್ರೆಗಳು ಅನಿವಾರ್ಯ. ಜೀವನಶೈಲಿ ಕಾಯಿಲೆಗಳನ್ನೂ ಅದೇ ತಕ್ಕಡಿಯಲ್ಲಿ ತೂಗುವುದು ಮೂರ್ಖತನ. ಜೀವನಶೈಲಿ ಕಾಯಿಲೆಗಳಿಗೆ ಕೇವಲ ಮಾತ್ರೆಗಳನ್ನೇ ತೆಗೆದುಕೊಂಡು ಆರಾಮ ಮಾಡಿಕೊಳ್ಳುತ್ತೇವೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು.

ಜೀವನಶೈಲಿ ಕಾಯಿಲೆಗಳಿಗೆ ಮೂಲಕಾರಣ ತಪ್ಪಾದ ಆಹಾರಪದ್ಧತಿ ಹಾಗೂ ಸರಿಯಿಲ್ಲದ ಜೀವನಶೈಲಿ. ಆದ್ದರಿಂದ ಜೀವನಶೈಲಿ, ಆಹಾರಪದ್ಧತಿಯನ್ನು ಸರಿಮಾಡಿಕೊಂಡಲ್ಲಿ, ವಿವೇಚನಾಪೂರ್ಣವಾಗಿ ಬಳಸಿಕೊಂಡಲ್ಲಿ ಸಮಸ್ಯೆಯ ಹತೋಟಿ ಸಾಧ್ಯ. ಹೇಗೆ ಕಟ್ಟಡವನ್ನು ಕಟ್ಟಲು ಅಡಿಪಾಯ, ಗೋಡೆ, ಮೇಲ್ಟಾವಣಿ ಮೂರೂ ಬೇಕೋ ಅದೇ ರೀತಿ ಆರೋಗ್ಯ ಎಂಬ ಸೌಧವನ್ನು ನಿರ್ಮಿಸಲು ಕೇವಲ ಚಿಕಿತ್ಸೆ, ಔಷಧ ಎಂಬ ಮೇಲ್ಟಾವಣಿ ಇದ್ದರೆ ಸಾಲದು. ವ್ಯವಸ್ಥಿತ ಆಹಾರಪದ್ಧತಿ, ಯೋಗ, ವ್ಯಾಯಾಮಗಳೂ ಅಗತ್ಯ.

ಪ್ರತಿನಿತ್ಯ ಒಂದು ಗಂಟೆ ಯೋಗ ಹಾಗೂ ವ್ಯಾಯಾಮವು ಆರೋಗ್ಯಸೌಧವನ್ನು ನಿರ್ಮಿಸಲು ಗೋಡೆ, ಕಂಬದಂತೆ ಕೆಲಸ ಮಾಡುತ್ತದೆ. ಸರಿಯಾದ ಆಹಾರಪದ್ಧತಿಯು ಅಡಿಪಾಯವಾಗಿರುತ್ತದೆ. ನಂತರದಲ್ಲಿ ಪೂರಕ ಆಹಾರಗಳು, ಚಿಕಿತ್ಸೆಗಳು ಹಾಗೂ ಔಷಧ ಮನೆಮದ್ದುಗಳ ಮೇಲ್ಟಾವಣಿಯನ್ನು ಹಾಕಿ ಆರೋಗ್ಯಸೌಧ ನಿರ್ಮಿಸಬೇಕು.

ಆರೋಗ್ಯ ಎಂಬುದು ಮಾರುಕಟ್ಟೆಯಲ್ಲಿ ಸಿಗುವ ಪದಾರ್ಥವಲ್ಲ. ಹಣವಿದ್ದರೆ ಹಾಸಿಗೆಗಳನ್ನು ಕೊಂಡಕೊಳ್ಳಬಹುದೇ ವಿನಾ ಒಳ್ಳೆಯ ನಿದ್ರೆಯನ್ನಲ್ಲ; ಔಷಧಿಗಳನ್ನು ಕೊಂಡಕೊಳ್ಳಬಹುದೇ ವಿನಾ ಆರೋಗ್ಯವನ್ನಲ್ಲ; ಹಣದಿಂದ ಒಳ್ಳೆಯ ಆಹಾರವನ್ನು ಕೊಂಡರೂ ಹಸಿವೆಯನ್ನು ಖರೀದಿಸಲು ಸಾಧ್ಯವಿಲ್ಲ. ಆದ್ದರಿಂದ ವಾಸ್ತವವನ್ನು ಅರ್ಥಮಾಡಿಕೊಂಡು ಜೀವನವನ್ನು ಯೋಗ್ಯ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು.

ಹಸಿವೆ, ನಿದ್ರೆ, ಆರೋಗ್ಯ ತನ್ನಷ್ಟಕ್ಕೆ ತಾನೇ ಸಾಗಬೇಕು. ಅಂತಹ ಜೀವನಶೈಲಿ ನಮ್ಮದಾಗಬೇಕು. ಇಂದಿನಿಂದಲೇ ಜಾಗೃತಿ ಪ್ರಾರಂಭವಾಗಲಿ. ಆರೋಗ್ಯಯುತ ಜೀವನಕ್ಕೆ ನಾಂದಿಯಾಗಲಿ. ಆರೋಗ್ಯಸೌಧವನ್ನು ನಿರ್ಮಿಸೋಣ. ಸ್ವಸ್ಥ ಸಮಾಜದ ಪರಿಕಲ್ಪನೆಯು ಸಾಕಾರವಾಗಲಿ.

ಡಾ. ವೆಂಕಟರಮಣ ಹೆಗಡೆ
ವೇದ ವೆಲ್ನೆಸ್ ಸೆಂಟರ್, ನಿಸರ್ಗ ಮನೆ ಶಿರಸಿ

Best Naturopathy Centre in Karnataka

Our Location 📍

Visit us at:

Veda Wellness Center, Nisarga Mane Campus, Ganesh Nagar, Baalehalli, Sirsi – 581402

Get in Touch with Us Today! 📞

Don’t miss out on the opportunity to transform your health the natural way! Reach out to us for more information or to book an appointment:

At Nisarga Mane, we are committed to helping you achieve a balanced and healthy lifestyle through the power of Ayurveda. Join us on this journey towards wellness and experience the difference!


Discover the magic of Ayurveda at Nisarga Mane – where nature meets healing. 🌿✨


Feel free to contact us anytime, and remember, your wellness journey starts here! 🧘‍♂️🧘‍♀️